ನನ್ನ ಬಗ್ಗೆ

1       

ಶ್ರೀ ಚಿಕ್ಕಕೊಮರಿ ಗೌಡ (ಸಿ.ಕೆ. ಗೌಡ ಎಂದು ಹೆಸರಾಂತ) ಅವರು ಹಾರೋಕೊಪ್ಪ ಗ್ರಾಮದ, ಚನ್ನಪಟ್ಟಣ ತಾಲ್ಲೂಕಿನ ರಾಮನಗರ ಜಿಲ್ಲೆಯಲ್ಲಿ (ಕರ್ನಾಟಕ ರಾಜ್ಯ) 24 ನೇ ಮಾರ್ಚ್ 1940 ರಂದು ಕೃಷಿಕರು ಕುಟುಂಬದಲ್ಲಿ ಜನಿಸಿದರು. ಇವರ ದಿವಂಗತ ತಂದೆ ಶ್ರೀ ಸಿದ್ದೇಗೌಡ ಮತ್ತು ದಿವಂಗತ ತಾಯಿ ಶ್ರೀಮತಿ ಸಿದ್ದಮ್ಮ ಅವರು ರೈತರಾಗಿದ್ದರು ಮತ್ತು ಪರೋಪಕಾರಿಗಳೆಂದು ಕರೆಸಿಕೊಂಡಿದ್ದು. ಇವರು ಡಿಪ್ಲೋಮಾ ಸಿವಿಲ್ ಇಂಜಿನಿಯರಿಂಗ್ ಓದಿದ ನಂತರ ಶ್ರೀ ಭೈರವೇಶ್ವರ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾಗಿ, ಸಾಹಿತಿಗಳು ಮತ್ತು ಸಮಾಜ ಸೇವೆಗಳನ್ನು ತಮ್ಮ ಉದ್ಯೋಗವನ್ನಾಗಿಸಿಕೊಂಡಿದ್ದಾರೆ.

      ಸಿ.ಕೆ. ಗೌಡರು ಶ್ರೀಮತಿ ಲಿಂಗಮ್ಮಾ(ಪದ್ಮಾ) ಇವರನ್ನು ವಿವಾಹವಾದರು. ಇವರ ಮಗ ಶ್ರೀ ಎಚ್.ಸಿ. ಶಾಂತಕುಮಾರ್ (ಬಿ.ಇ) ಶ್ರೀಮತಿ ಸುಷ್ಮಾ ಕುಮಾರ್ ಅವರನ್ನು ವಿವಾಹವಾದರು. ಇವರ ಇಬ್ಬರು ಹೆಣ್ಣುಮಕ್ಕಳು ಶ್ರೀಮತಿ ಎಚ್.ಸಿ ನಿರ್ಮಲಾ (ವೀಣಾ) ಇವರು ಶ್ರೀ ಬಿಆರ್ ವಿವೇಕ್ ಅವರನ್ನು ವಿವಾಹವಾದರು ಮತ್ತು ಶ್ರೀಮತಿ ಎಚ್.ಸಿ ಲೀಲಾವತಿ (ವಾಣಿ) ಇವರು ಶ್ರೀ ರವಿಶಂಕರ್ (ಬಿ.ಇ) ಅವರನ್ನು ವಿವಾಹವಾದರು.